ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು, ಮಂಗಳೂರು, ಇದರ ಕನ್ನಡ ವಿಭಾಗದ ವತಿಯಿಂದ ನವೆಂಬರ್ 4 ರಂದು ಬೆಳಿಗ್ಗೆ 9:30 ಕ್ಕೆ ಕಾಲೇಜು ಸಭಾಂಗಣದಲ್ಲಿ  ಕನ್ನಡ ರಾಜ್ಯೋತ್ಸವವನ್ನು  ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯವಾಣಿ, ಮಂಗಳೂರು ಇಲ್ಲಿನ ಹಿರಿಯ ವರದಿಗಾರರಾದ ಶ್ರೀ ಹರೀಶ್ ಮೋಟುಕನ ಅವರು ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ  ಡಾ. ಭಾನುಪ್ರಕಾಶ್ ಬಿ.ಇ. ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಂಯೋಜಕರಾದ ಶ್ರೀಮತಿ ಜೀವಿತ, ಶ್ರೀಮತಿ ರೇಣುತಾಕ್ಷಿ  ಹಾಗೂ ವಿದ್ಯಾರ್ಥಿ ಸಂಯೋಜಕರಾದ ದೀಶ ಮತ್ತು ಪ್ರತೀಕ್ಷ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಕಾರ್ಯಕ್ರಮ ನಾಡಗೀತೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿಗಳು ಅತಿಥಿಗಳನ್ನು ಸ್ವಾಗತಿಸಿ ಕನ್ನಡ ಭಾಷೆ ಬಗೆ ಪ್ರಾಸ್ತಾವಿಕ ನುಡಿಗಳನ್ನಾಡಿ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಹರೀಶ್ ಮೋಟುಕನ ಅವರು ತಮ್ಮ ಭಾಷಣದಲ್ಲಿ ಕನ್ನಡ ಭಾಷೆ, ನಾಡು-ನುಡಿಯ ಇತಿಹಾಸ ಹಾಗೂ ಪತ್ರಿಕೋದ್ಯಮದಲ್ಲಿ ಕನ್ನಡದ ಪಾತ್ರದ ಬಗ್ಗೆ ಮಾತನಾಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರಾದ  ಡಾ. ಭಾನುಪ್ರಕಾಶ್ ಬಿ.ಇ. ಯುವಜನರು ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸಬೇಕೆಂದು ಕರೆ ನೀಡಿದರು. ನಂತರ ಯಶಸ್ ಪೂಜಾರಿ  ವಂದನಾರ್ಪಣೆ ಮಾಡಿದರು.  ಶ್ರೀಮತಿ ಜೀವಿತ ಕಾರ್ಯಕ್ರಮವನ್ನು ಆಯೋಜಿಸಿದರು.